¡Sorpréndeme!

ಮಫ್ತಿ ಪೊಲೀಸ್ ಆಗಲು ಹೊರಟಿದ್ದಾರೆ ರಚಿತಾ ರಾಮ್ | Filmibeat Kannada

2017-11-16 1 Dailymotion

ಮಫ್ತಿ ಪೊಲೀಸ್ ಆಗಲಿದ್ದಾರೆ ಡಿಂಪಲ್ ಕ್ವೀನ್ ರಚಿತಾ ರಾಮ್! ಇತ್ತೀಚಿಗಷ್ಟೆ ನಟಿ ಪ್ರಿಯಾಂಕಾ ಉಪೇಂದ್ರ 'ಸೆಕೆಂಡ್ ಹಾಫ್' ಚಿತ್ರದಲ್ಲಿ ಪೊಲೀಸ್ ಆಗಿ ಮಿಂಚಿದ್ದರು. ಆದರೆ ಈಗ ನಟಿ ರಚಿತಾ ರಾಮ್ ಕೂಡ ಪೊಲೀಸ್ ಆಗುವುದಕ್ಕೆ ಸಜ್ಜಾಗಿದ್ದಾರೆ. ಚಿತ್ರರಂಗಕ್ಕೆ ಬಂದು ಇಷ್ಟು ವರ್ಷಗಳಲ್ಲಿ ಹೆಚ್ಚಾಗಿ ಹೋಮ್ಲಿ ಲುಕ್ ನಲ್ಲಿ ರಚಿತಾ ರಾಮ್ ಕಾಣಿಸಿಕೊಂಡಿದ್ದರು. ಆದರೆ ಈಗ ಇದೇ ಮೊದಲ ಬಾರಿಗೆ ವಿಭಿನ್ನ ಪಾತ್ರ ಮಾಡುವುದಕ್ಕೆ ರಚಿತಾ ಮುಂದಾಗಿದ್ದಾರೆ. ಡಿಂಪಲ್ ಕ್ವೀನ್ ಇದೀಗ ತಮ್ಮ ಹೊಸ ಚಿತ್ರದಲ್ಲಿ ಪೊಲೀಸ್ ಆಗುತ್ತಿದ್ದು, ಆ ಸಿನಿಮಾದ ಕೆಲ ಮಾಹಿತಿಗಳು ಮುಂದಿದೆ. ರಚಿತಾ ರಾಮ್ ತಮ್ಮ ಹೊಸ ಸಿನಿಮಾದಲ್ಲಿ ಪೊಲೀಸ್ ಪಾತ್ರವನ್ನು ಮಾಡಲಿದ್ದಾರೆ. ಈ ಚಿತ್ರವನ್ನು ಆರ್.ಜೆ.ಮಯೂರ್ ನಿರ್ದೇಶನ ಮಾಡಲಿದ್ದಾರೆ.ಈ ಹಿಂದೆ ರಚಿತಾ ನಿರ್ಮಾಣದ 'ರಿಷಭಪ್ರಿಯ' ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದ ಆರ್.ಜೆ.ಮಯೂರ್ ಇದೇ ಮೊದಲ ಬಾರಿಗೆ ದೊಡ್ಡ ಸಿನಿಮಾವನ್ನು ಮಾಡುತ್ತಿದ್ದಾರೆ.